ಮದ್ಯದ ಅಮಲಲ್ಲಿ ವೈದ್ಯರ ಮೇಲೆಯೇ ಹಲ್ಲೆಗೆ ಯತ್ನಿಸಿದ ಭೂಪ - ವೈದ್ಯರ ಮೇಲೆಯೇ ಹಲ್ಲೆಗೆ ಯತ್ನ
🎬 Watch Now: Feature Video

ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಯಕ್ಸಂಬಾ ಗ್ರಾಮದ ಸಂಜೀವ ಕುಮಾರ್ ಬಣವಾಣೆ ಎಂಬ ವ್ಯಕ್ತಿ ಕುಡಿದ ಮತ್ತಲ್ಲಿ ಆಸ್ಪತ್ರೆಯ ಪಿಠೋಪಕರಣಗಳನ್ನು ಧ್ವಂಸ ಮಾಡಿದ್ದಾನೆ. ಈ ವೇಳೆ ಆತನ ಕೈಗೂ ಗಾಯವಾಗಿದೆ. ನಿನ್ನೆ ಮಧ್ಯಾಹ್ನ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವೈದ್ಯ ಹಾಗೂ ಆಸ್ಪತ್ರೆ ಸಿಬ್ಬಂದಿ ಸದಲಗಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.