ಶಿವನಿಗೆ ವಿಶೇಷ ಅಲಂಕಾರ, ಪೂಜೆ... ದೇವಸ್ಥಾನದಲ್ಲಿ ಶಿವನಾಮ ಸ್ಮರಣೆ - Mahashivaratri festival celebration in Haveri
🎬 Watch Now: Feature Video

ಹಾವೇರಿ: ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಶಿವರಾತ್ರಿ ಆಚರಿಸಲಾಗುತ್ತಿದೆ. ಬೆಳಗ್ಗೆಯಿಂದಲೇ ಭಕ್ತರು ಶುಚಿಭೂತರಾಗಿ ಶಿವನ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಬಸವೇಶ್ವರ ನಗರದ ಶಿವನ ದೇವಾಲಯದಲ್ಲಿ ಸಂಭ್ರಮ ಕಳೆಗಟ್ಟಿತ್ತು. ಕಳಶದ ಮೂಲಕ ನೀರು ತಂದ ಭಕ್ತರು, ಶಿವನಿಗೆ ಅಭಿಷೇಕ ಮಾಡಿದರು. ಕರ್ಜಿಗಿಮಠ ಮತ್ತು ಬಣ್ಣದ ಮಠ ಸ್ವಾಮೀಜಿಗಳು ಉಪಸ್ಥಿತರಿದ್ದರು. ಇನ್ನು ದ್ವಾದಶಿ ಜ್ಯೋತಿರ್ಲಿಂಗಗಳ ದೇವಸ್ಥಾನದಲ್ಲೂ ಶಿವರಾತ್ರಿ ಸಂಭ್ರಮ ಕಂಡುಬಂತು. ದೇವಸ್ಥಾನದ ಸಮುಚ್ಛಯದಲ್ಲಿರುವ ಅನ್ನಪೂರ್ಣೇಶ್ವರಿ, ಗಜಾನನ, ಆಂಜನೇಯ ಮೂರ್ತಿಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.