ಮಹಾಲಯ ಅಮಾವಾಸ್ಯೆ ಪರಿಣಾಮ: ಗಜಪಡೆ ತಾಲೀಮಿಗೆ ಬ್ರೇಕ್ - mysore dasara- 2019
🎬 Watch Now: Feature Video
ಮಹಾಲಯ ಅಮಾವಾಸ್ಯೆ ವೇಳೆ ಆನೆಗಳನ್ನು ಹೊರಗಡೆ ಕರೆದುಕೊಂಡು ಹೋದರೆ ದೃಷ್ಟಿ ತಾಗುತ್ತದೆ ಹಾಗೂ ಆನೆಗಳ ವರ್ತನೆ ಬದಲಾಗುತ್ತದೆ ಎಂಬ ಕಾರಣದಿಂದ ತಾಲೀಮಿಗೆ ವಿಶ್ರಾಂತಿ ನೀಡಲಾಗುತ್ತದೆ. ಹಾಗಾಗಿ ಕ್ಯಾಪ್ಟನ್ ಅರ್ಜುನ ಸೇರಿದಂತೆ 13 ಆನೆಗಳಿಗೆ ನೀಡಲಾಗುವ ತರಬೇತಿಗೆ ವಿರಾಮ ನೀಡಲಾಗಿದೆ. ಆಗಸ್ಟ್ 26ರಂದು ಅರಮನೆಗೆ ಆಗಮಿಸಿದ ಕ್ಯಾಪ್ಟನ್ ಅರ್ಜುನ, ವಿಜಯ, ಅಭಿಮನ್ಯು, ಧನಂಜಯ, ಈಶ್ವರ, ಗೋಪಿ, ದುರ್ಗಾಪರಮೇಶ್ವರಿ, ಜಯಪ್ರಕಾಶ, ಲಕ್ಷ್ಮಿ, ಬಲರಾಮ, ಕಾವೇರಿ, ವಿಕ್ರಮ, ಗೋಪಾಲಸ್ವಾಮಿ ಆನೆಗಳಿಗೆ ಹೊರಾವರಣದಲ್ಲಿರುವ ಆನೆಗಳ ತೊಟ್ಟಿಯಲ್ಲಿ ಎಣ್ಣೆ ಸ್ನಾನ ಮಾಡಿಸಿ ನಂತರ ಅವುಗಳಿಗೆ ಉಪಹಾರ ನೀಡಿ ವಿಶ್ರಾಂತಿ ನೀಡಲಾಗುತ್ತದೆ.