ಭರ್ತಿಯಾದ ಹೊಸಕೆರೆಗೆ ಬಾಗಿನ ಅರ್ಪಿಸಿದ ಶಾಸಕ ರೇಣುಕಾಚಾರ್ಯ - M. P. Renukaacharya Visits savalanga lake
🎬 Watch Now: Feature Video
ದಾವಣಗೆರೆ: ನ್ಯಾಮತಿ ತಾಲೂಕಿನ ಸವಳಂಗದಲ್ಲಿರುವ ಹೊಸಕೆರೆ ಭರ್ತಿಯಾಗಿರುವುದರಿಂದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಗಂಗೆಗೆ ಬಾಗಿನ ಅರ್ಪಿಸಿದರು. ನ್ಯಾಮತಿ ತಾಲೂಕಿನ ಸಾವಿರಾರು ಎಕರೆ ಜಮೀನಿಗೆ ನೀರುಣಿಸುವ ಕೆರೆ ಇದಾಗಿದ್ದು, ಕೆರೆ ಭರ್ತಿಯಾಗಿರುವ ಕಾರಣ ಕೃಷಿ ಚಟುವಟಿಕೆಗಳು ಗರಿಗೆದರಿವೆ.