ತುಂಬಿ ಹರಿಯುತ್ತಿರುವ ತುಪ್ಪರಿ ಹಳ್ಳ: ಸೇತುವೆ ಮೇಲೆ ಸಿಲುಕಿದ ಲಾರಿ - ಧಾರವಾಡ ಜಿಲ್ಲೆ ಸುದ್ದಿ
🎬 Watch Now: Feature Video
ಧಾರವಾಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ತುಪ್ಪರಿ ಹಳ್ಳಕ್ಕೆ ಮತ್ತಷ್ಟು ನೀರು ಬಂದಿದೆ. ಇದರಿಂದಾಗಿ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಬಳಿಯ ಸೇತುವೆ ಮೇಲೆ ನೀರು ಬಂದಿದೆ. ಧಾರವಾಡ-ಸವದತ್ತಿ ಮಾರ್ಗ ಬಂದ್ ಆಗಿದೆ. ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಲಾರಿಯೊಂದು ಸಿಲುಕಿಕೊಂಡಿದೆ. ಸ್ಥಳೀಯರು ಕೊನೆಗೂ ಲಾರಿಯನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಬೆಳಗಾವಿ ಸವದತ್ತಿ ರಸ್ತೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.