ಮುಂಬೈನಿಂದ ಕಾಫಿನಾಡಿಗೆ ಬಂದ ಲಾರಿ ಡ್ರೈವರ್, ಕ್ಲೀನರ್ ಕಳ್ಳಾಟ: ಕ್ವಾರಂಟೈನ್ಗೆ ತಳ್ಳಿದ ಅಧಿಕಾರಿಗಳು - ಸೀಲ್ಡೌನ್
🎬 Watch Now: Feature Video
ಚಿಕ್ಕಮಗಳೂರು: ಮುಂಬೈನಿಂದ ಜಿಲ್ಲೆಗೆ ಆಗಮಿಸಿದ್ದ ಲಾರಿ ಡ್ರೈವರ್ ಹಾಗೂ ಕ್ಲೀನರ್ ಆತಂಕದ ವಾತಾವರಣ ಸೃಷ್ಟಿಸಿದ್ದಾರೆ. ಮುಂಬೈನಿಂದ ಬಂದ ಬಳಿಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದೇ ಓಡಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖಾ ಸಿಬ್ಬಂದಿ ಅವರನ್ನು ಹಿಡಿದು ಕ್ವಾರೆಂಟೈನ್ಗೆ ಕಳಿಸಿದ್ದಾರೆ. ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಇಬ್ಬರ ಗಂಟಲು ದ್ರವ, ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ತರೀಕೆರೆ ನಗರದ ಕ್ವಾಜಿ ಬೀದಿಯನ್ನು ಸೀಲ್ಡೌನ್ ಮಾಡಲಾಗಿದ್ದು, ಸಾರ್ವಜನಿಕರು ಈ ಭಾಗದಲ್ಲಿ ಸಂಚಾರ ಮಾಡದಂತೆ ಎಚ್ಚರಿಕೆ ವಹಿಸಿದ್ದಾರೆ.