ಸಿಎಂ ತವರು ಜಿಲ್ಲೆಯಲ್ಲೇ ತರಕಾರಿ ಮಾರುಕಟ್ಟೆ ಫುಲ್ ರಶ್
🎬 Watch Now: Feature Video
ಕೊರೊನಾ ವೈರಸ್ ಹರಡದಂತೆ ರಾಜ್ಯಾದ್ಯಂತ ಲಾಕ್ಡೌನ್ ಘೋಷಣೆಯಾಗಿದ್ದು, ಸಿಎಂ ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಮಾತ್ರ ಜನ ಎಪಿಎಂಸಿ ಮಾರುಕಟ್ಟೆಗೆ ಮುಗಿಬಿದ್ದಿದ್ದಾರೆ. ತರಕಾರಿ ಕೊಳ್ಳಲು ಜನರು ಗುಂಪು-ಗುಂಪಾಗಿ ಆಗಮಿಸಿದ್ದು, ಬೆಳಗ್ಗೆಯಿಂದಲೇ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಪೊಲೀಸರು ಬಂದು ಹೇಳಿದ್ರೂ ಸಹ ಜನ ಕೇಳುವ ಮೂಡ್ನಲ್ಲಿ ಇರಲಿಲ್ಲ. ಯುಗಾದಿ ಹಬ್ಬದ ಖರೀದಿಯನ್ನು ಜನ ಯಾವುದೇ ಭಯವಿಲ್ಲದೇ, ಮಾಸ್ಕ್ ಧರಿಸದೇ ಜೋರಾಗಿಯೇ ನಡೆಸುತ್ತಿದ್ದರು. ಸದ್ಯದ ಪರಿಸ್ಥಿತಿಯ ಬಗ್ಗೆ ನಮ್ಮ ಶಿವಮೊಗ್ಗ ಪ್ರತಿನಿಧಿ ನಡೆಸಿದ ವಾಕ್ ತ್ರೂ ಮಾಹಿತಿ ನೀಡಿದ್ದಾರೆ.