ಹುಬ್ಬಳ್ಳಿಯಲ್ಲಿ ಒಳ ಚರಂಡಿಗೆ ಬಿದ್ದ ಎಮ್ಮೆ; ಸ್ಥಳೀಯರಿಂದ ರಕ್ಷಣೆ - hubli buffalo rescue news
🎬 Watch Now: Feature Video
ಹುಬ್ಬಳ್ಳಿ: ಆಕಸ್ಮಿಕವಾಗಿ ಒಳಚರಂಡಿಗೆ ಬಿದ್ದ ಎಮ್ಮೆಯನ್ನು ಸ್ಥಳೀಯರು ರಕ್ಷಿಸಿರುವ ಘಟನೆ ಜಗದೀಶ್ ನಗರದ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ. ನಗರದಲ್ಲಿ ನಿನ್ನೆ ಸಾಯಂಕಾಲ ಎಮ್ಮೆಯೊಂದು ಏಕಾಏಕಿ ಒಳಚರಂಡಿಯಲ್ಲಿ ಬಿದ್ದು ಒದ್ದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅದನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಅದೃಷ್ಟವಶಾತ್ ಎಮ್ಮೆಗೆ ಯಾವುದೇ ಗಾಯಗಳು ಆಗಿಲ್ಲ.