ಕಡೆಯ ಕಾರ್ತಿಕ ಸೋಮವಾರ : ಕೋರಮಂಗಲದ ಸುಂದರೇಶ್ವರನಿಗೆ ವಿಶೇಷ ಪೂಜೆ - ಕಡೆಯ ಕಾರ್ತಿಕ ಸೋಮವಾರದ ವಿಶೇಷ ಪೂಜೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9870420-18-9870420-1607921598343.jpg)
ಇಂದು ಕಡೆಯ ಕಾರ್ತಿಕ ಸೋಮವಾರ. ಬೆಂಗಳೂರಿನ ಎಲ್ಲಾ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಸಂಭ್ರಮ ಮನೆ ಮಾಡಿದೆ. ಕೋರಮಂಗಲದ ನೂರು ವರ್ಷ ಇತಿಹಾಸವುಳ್ಳ ಸುಂದರ ಕಲ್ಯಾಣ ಸುಂದರೇಶ್ವರ ದೇವಾಲಯದಲ್ಲಿ ಸುಂದರೇಶ್ವರ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೂ ಭಕ್ತರು ದೇವರ ದರ್ಶನ ಪಡೆದರು. ಈ ಬಾರಿ ಕಾರ್ತಿಕ ಮಾಸದಲ್ಲಿ ಐದು ಸೋಮವಾರಗಳು ಬಂದಿರುವುದು ವಿಶೇಷ. ಅದರಲ್ಲೂ ಅಮಾವಾಸ್ಯೆ ಬಂದಿರುವುದು ಮತ್ತೊಂದು ವಿಶೇಷ. ಸಂಜೆ ದೀಪೋತ್ಸವ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ.
Last Updated : Dec 14, 2020, 11:11 AM IST