ಖಾಸಗಿ ಕಟ್ಟಡದಲ್ಲಿ ಸರ್ಕಾರಿ ಹಾಸ್ಟೆಲ್: ಸಮಸ್ಯೆ ಹಿಂದಿದೆಯೇ ದೊಡ್ಡ ಲಾಬಿ?
🎬 Watch Now: Feature Video
ಕೊಪ್ಪಳ : ಜಿಲ್ಲೆಯ ಬಹುತೇಕ ಕಡೆ ಸುರಕ್ಷತೆ ಇಲ್ಲದ ಕಟ್ಟಡಗಳಲ್ಲಿ ಸರ್ಕಾರಿ ವಿದ್ಯಾರ್ಥಿ ನಿಲಯಗಳನ್ನು ನಡೆಸಲಾಗುತ್ತಿದೆ. ಇದರಿಂದ ಮಕ್ಕಳು ಭಯದಲ್ಲಿಯೇ ವಾಸ ಮಾಡಬೇಕಾದ ಪರಿಸ್ಥಿತಿಯಿದೆ. ಸುರಕ್ಷಿತವಲ್ಲದ ಕಟ್ಟಡಗಳಲ್ಲಿರುವ ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳು ಈ ಹಿಂದೆ ಅನೇಕ ತೊಂದರೆಗಳನ್ನು ಅನುಭವಿಸಿದ ಉದಾಹರಣೆ ಕಣ್ಣ ಮುಂದಿರುವಾಗಲೇ, ಇತ್ತೀಚಿಗೆ ಬಿಸಿಎಂ ಹಾಸ್ಟೆಲ್ ಒಂದರಲ್ಲಿ ನಡೆದ ನಡೆದ ದೊಡ್ಡ ದುರಂತವು ಮಕ್ಕಳ ಪಾಲಕರನ್ನು ಇನ್ನಷ್ಟು ಆತಂಕ ಪಡುವಂತೆ ಮಾಡಿದೆ. ಆದರೂ ಮಕ್ಕಳನ್ನು ಹಾಸ್ಟೆಲ್ಗೆ ಸೇರಿಸುವುದು ಪೋಷಕರಿಗೆ ಅನಿವಾರ್ಯ ಎಂಬಂತಾಗಿದೆ. ಆದರೆ ಇವೆಲ್ಲದರ ಮಧ್ಯೆ ಬಾಡಿಗೆ ಕಟ್ಟಡಗಳಲ್ಲಿ ಹಾಸ್ಟೆಲ್ ನಡೆಸುವ ಮೂಲಕ ಅಧಿಕಾರಿಗಳು ಖಾಸಗಿ ಕಟ್ಟಡ ಮಾಲಿಕರೊಂದಿಗೆ ಅವ್ಯವಹಾರದಲ್ಲಿ ತೊಡಗಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ.