ವೃದ್ಧೆಯ ಕೊರಳಿಂದ 40 ಗ್ರಾಂ ಚಿನ್ನದ ಸರ ಕಸಿದು ಪರಾರಿ: ಕೃತ್ಯ ಸಿಸಿಟಿವಿಯಲ್ಲಿ ಸೆರೆ - ಕೋಲಾರ ಇತ್ತೀಚಿನ ಸುದ್ದಿ
🎬 Watch Now: Feature Video
ಕೋಲಾರ: ನಗರದಲ್ಲಿ ಹಾಡುಹಗಲೇ ಸರಗಳ್ಳರು ಅಟ್ಟಹಾಸ ಮೆರೆದಿದ್ದು, ನಿನ್ನೆ ಮಧ್ಯಾಹ್ನ ಮನೆಯಿಂದ ಹೊರಬಂದ ವೃದ್ಧೆಯನ್ನು ಹಿಂಬಾಲಿಸಿಕೊಂಡು ಬಂದ ಚೋರರು 40 ಗ್ರಾಂ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ. ಕೋಲಾರ ನಗರದ ಪಿ.ಸಿ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಬಡಾವಣೆಯ ನಿವಾಸಿ ಪಾರ್ವತಮ್ಮ (70) ಎಂಬುವರ ಸುಮಾರು ಎರಡೂವರೆ ಲಕ್ಷ ಬೆಲೆ ಬಾಳುವ ಚಿನ್ನದ ಸರ ಎಗರಿಸಿದ್ದಾರೆ. ದುಷ್ಕರ್ಮಿಗಳು ಚಿನ್ನದ ಸರ ಕಸಿದುಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.