ಕೋಲಾರ: ಗಾಯಗೊಂಡಿದ್ದ ನಾಗರ ಹಾವಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಜನ - ಕೋಲಾರ ತಾಲೂಕಿನ ಗದ್ದೆ ಕಣ್ಣೂರು ಗ್ರಾಮ
🎬 Watch Now: Feature Video
ಗಾಯಗೊಂಡಿದ್ದ ವಿಷಪೂರಿತ ನಾಗರ ಹಾವಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿರುವ ಘಟನೆ ನಡೆದಿದೆ. ಕೋಲಾರ ತಾಲೂಕಿನ ಗದ್ದೆ ಕಣ್ಣೂರು ಗ್ರಾಮದ ಕೃಷ್ಣಮೂರ್ತಿ ಎಂಬುವರ ತೋಟದಲ್ಲಿ ಟ್ರ್ಯಾಕ್ಟರ್ನಿಂದ ಉಳುಮೆ ಮಾಡುವ ಸಂದರ್ಭದಲ್ಲಿ ನಾಗರ ಹಾವೊಂದು ಗಾಯಗೊಂಡಿತ್ತು. ಟ್ರ್ಯಾಕ್ಟರ್ನಡಿ ಸಿಲುಕಿಕೊಂಡ ನಾಗರಹಾವಿಗೆ ಗಂಭೀರ ಗಾಯವಾಗಿದ್ದ ಪರಿಣಾಮ ಸ್ನೇಕ್ ವೇಣು ಎಂಬಾತ ಕೂಡಲೇ ಪಶು ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೆ ಗಾಯಗೊಂಡಿದ್ದ ಹಾವಿಗೆ ವೈದ್ಯ ಆದರ್ಶ ಎಂಬುವರು ಹೊಲಿಗೆ ಹಾಕಿ ಆರೈಕೆ ಮಾಡಿದರು. ನಂತರ ನಾಗರ ಹಾವನ್ನ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.