ಕಡಲಿಗಿಳಿಯದ ಬೋಟ್ಗಳು... ಪರಿಹಾರಕ್ಕಾಗಿ ಸರ್ಕಾರದ ಕದ ತಟ್ಟಿದ ಕಡಲ ಮಕ್ಕಳು!
🎬 Watch Now: Feature Video
ಕಾರವಾರ: ಕರಾವಳಿ ಭಾಗದ ಬಹುತೇಕ ಜನರಿಗೆ ಮೀನುಗಾರಿಕೆಯೇ ಬಹುಮುಖ್ಯ ಕಸುಬು. ಮೀನುಗಾರಿಕೆ ಬಿಟ್ಟು ಬೇರೆ ಉದ್ಯೋಗವೇ ಗೊತ್ತಿಲ್ಲದ ಬಹುತೇಕ ಮೀನುಗಾರರು ಇದೀಗ ಪ್ರಸಕ್ತ ಸಾಲಿನಲ್ಲಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಕಂಗಾಲಾಗಿದ್ದಾರೆ. ನಾಲ್ಕು ತಿಂಗಳುಗಳ ಕಾಲ ನಿರಂತರವಾಗಿ ಸುರಿದ ಮಳೆಗೆ ಕಡಲು ಪ್ರಕ್ಷುಬ್ಧಗೊಂಡು ಆರೇಳು ಬಾರಿ ಮೀನುಗಾರಿಕೆಯೇ ಸಂಪೂರ್ಣ ಸ್ತಬ್ಧಗೊಂಡಿದೆ. ಇದೀಗ ರೈತರಂತೆ ತಮ್ಮನ್ನು ಸಂತ್ರಸ್ತರೆಂದು ಪರಿಗಣಿಸಿ, ಪರಿಹಾರ ವಿತರಿಸುವಂತೆ ರಾಜ್ಯ ಸರ್ಕಾರಕ್ಕೆ ಮೊರೆಯಿಟ್ಟಿದ್ದಾರೆ ಮೀನುಗಾರರು.