13.62 ಸೆಕೆಂಡ್ ನಲ್ಲಿ 142.5 ಮೀ. ಓಟ...ಕರ್ನಾಟಕದ ಉಸೇನ್ ಬೋಲ್ಟ್ ಶ್ರೀನಿವಾಸ ಗೌಡ! - ಕಂಬಳದ ಓಟಗಾರ ಶ್ರೀನಿವಾಸ ಗೌಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6078738-thumbnail-3x2-surya.jpg)
ಕಂಬಳ ಕ್ರೀಡೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಶ್ರೀನಿವಾಸ ಗೌಡ ಅವರು ಮಾಡಿದ ಸಾಧನೆ ಎಲ್ಲರ ನಿಬ್ಬೆರಗಾಗಿಸಿದೆ.100 ಮೀಟರ್ ಓಟವನ್ನು 9.58 ಸೆಕೆಂಡ್ ನಲ್ಲಿ ಮುಗಿಸಿ ದಾಖಲೆ ನಿರ್ಮಿಸಿದ ಉಸೇನ್ ಬೋಲ್ಟ್ ಸಾಧನೆ ಯಾರು ಮೀರಿಸಿಲ್ಲ. ಈ ಸಾಧನೆಯನ್ನು ಮೀರಿಸಿ ಕಂಬಳದ ಗದ್ದೆಯಲ್ಲಿ ಕೋಣಗಳೊಂದಿಗೆ ಓಡಿ ಶ್ರೀನಿವಾಸ ಗೌಡ ದಾಖಲೆ ನಿರ್ಮಿಸಿದ್ದಾರೆ. 142.5 ಮೀಟರ್ ಅನ್ನು 13.62 ಸೆಕೆಂಡ್ ನಲ್ಲಿ ಕ್ರಮಿಸಿದ್ದಾರೆ. 100 ಮೀಟರ್ ಗೆ ಅದನ್ನು ಇಳಿಸಿದರೆ ಉಸೇನ್ ಬೋಲ್ಟ್ ಗಿಂತಲೂ 3 ಸೆಕೆಂಡ್ ವೇಗವಾಗಿ ಅವರು ಕ್ರಮಿಸಿದ್ದಾರೆ. ಶ್ರೀನಿವಾಸ ಗೌಡ ಅವರು ಈ ಬಾರಿಯ ಕಂಬಳದಲ್ಲಿ ಹತ್ತು ಕಡೆ ಚಿನ್ನದ ಪದಕ ಪಡೆದ ಕಂಬಳ ಓಟಗಾರ.