ಮರಾಠ ಪ್ರಾಧಿಕಾರ ವಿರುದ್ಧ ಶಿವರಾಮೇಗೌಡ ಕಿಡಿ:ಮೈಸೂರು ಬ್ಯಾಂಕ್ ವೃತ್ತ ಬಳಿ ಪ್ರತಿಭಟನೆ - Karnataka Rakshana Vedike protests against the formation of the Maratha Development Corporation
🎬 Watch Now: Feature Video
ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ರಚನೆಗೆ ವಿರೋಧಿಸಿ ಇಂದು ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಕರವೇ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಕರವೇ ಶಿವರಾಮೇಗೌಡ ಬಣ ಭಾಗಿಯಾಗಿದ್ದು, ಅನುಮತಿ ಪಡೆಯದೇ ಪ್ರತಿಭಟನೆ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಕೈಲಿ ಖಾಲಿ ಚಿಪ್ಪು ಹಿಡಿದು ಪ್ರತಿಭಟನೆಗೆ ನಡೆಸಿದ್ದು, ರಾಜ್ಯ ಸರ್ಕಾರದ ಕ್ರಮ ಖಂಡಿಸುವುದರ ಜೊತೆಗೆ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.