ಲಾಕ್ ಡೌನ್: ಗೋವಾದಲ್ಲಿ ಸಿಲುಕಿಕೊಂಡ ಕನ್ನಡಿಗರು... - ಗೋವಾದಲ್ಲಿ ಸಿಲುಕಿಕೊಂಡ ಕನ್ನಡಿಗರು
🎬 Watch Now: Feature Video
ಗದಗ: ಗೋವಾದ ಪಣಜಿ ಬಳಿಯ ಮಾಪ್ಸಾಕ್ಕೆ ಹೋಗಿದ್ದ ಗದಗ ಜಿಲ್ಲೆಯ ಕಾರ್ಮಿಕರು ಲಾಕ್ ಡೌನ್ನಿಂದಾಗಿ ಊರಿಗೆ ವಾಪಸ್ ಆಗಲು ಆಗದೇ ಪರದಾಡುತ್ತಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದ 30ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಮಾಪ್ಸಾಕ್ಕೆ ಕೆಲಸಕ್ಕಾಗಿ ಹೋಗಿದ್ದರು. ಆದರೀಗ ಕೊರೊನಾ ಭೀತಿಯಿಂದ ಗೋವಾ ಸಂಪೂರ್ಣ ಲಾಕ್ ಡೌನ್ ಆಗಿದೆ. ಇದರಿಂದಾಗಿ ಕಾರ್ಮಿಕರಿಗೆ ನಿನ್ನೆಯಿಂದ ಕೆಲಸ ವಿಲ್ಲದೇ ಊಟವು ಸಿಗದೆ ಪರದಾಡುತ್ತಿದ್ದಾರೆ. ಪಣಜಿಯಿಂದ ಸ್ವಗ್ರಾಮಕ್ಕೆ ತೆರಳಲು ವ್ಯವಸ್ಥೆ ಮಾಡಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಬೇಡಿಕೊಳ್ಳುತ್ತಿದ್ದಾರೆ.