ಕೈಲ್ ಪೊದು.. ಕೊಡವರ ವಿಶೇಷ ಹಬ್ಬ!
🎬 Watch Now: Feature Video
ಕರ್ನಾಟಕದ ಕಾಶ್ಮೀರ ಎಂದು ಕರೆಯಲ್ಪಡುವ ಕೊಡಗು ತನ್ನದೇ ಆದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿದೆ. ಇಲ್ಲಿನ ಹಬ್ಬಗಳು,ಸಂಪ್ರದಾಯಗಳು ತುಂಬಾ ವಿಭಿನ್ನ. ಕೊಡಗಿನ ಜನ ಮಾತ್ರ ಆಚರಿಸುವ ಅಂತಹ ವಿಭಿನ್ನ ಹಬ್ಬಗಳಲ್ಲಿ ಕೈಲ್ ಮುಹೂರ್ತವೂ ಒಂದು. ಕೊಡಗು ಭಾಷೆಯಲ್ಲಿ ಇದನ್ನು ಕೈಲ್ ಪೊದು ಎಂದು ಕರೆಯುತ್ತಾರೆ. ನಾಳೆ ಅಂದರೆ ಅಗಸ್ಟ್ 3ರಂದು ಈ ಕೈಲ್ ಮುಹೂರ್ತ ಹಬ್ಬವನ್ನು ಕೊಡಗಿನಾದ್ಯಂತ ಜನ ಆಚರಿಸುತ್ತಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರವೂ ಕೈಲ್ ಮುಹೂರ್ತ ಹಬ್ಬಕ್ಕೆ ಕೊಡಗು ಜಿಲ್ಲೆಗೆ ಸೀಮಿತವಾಗಿ ರಜೆ ಘೋಷಿಸಿದೆ.