ನ್ಯಾಯ ತಡವಾಗಿರಬಹುದು ಆದ್ರೆ ಕುರುಡಲ್ಲ: ನಿರ್ಭಯಾ ತಾಯಿಯ ಮನದಾಂತರಾಳ!! - ನಿರ್ಭಯಾ ಪ್ರಕರಣ ಲೆಟೆಸ್ಟ್ ನ್ಯೂಸ್
🎬 Watch Now: Feature Video

ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ್ದು, ಇದನ್ನು ದೇಶದ ಜನತೆ ಸ್ವಾಗತಿಸಿದೆ. ನ್ಯಾಯಾಲಯದ ತೀರ್ಪಿನ ನಂತರ ಮನೆಗೆ ತಲುಪಿದ ನಿರ್ಭಯಾ ತಾಯಿಯನ್ನು ಅಕ್ಷರ್ಧಮ್ ಅಪಾರ್ಟ್‌ಮೆಂಟ್‌ನ ಜನರು ಸ್ವಾಗತಿಸಿ ಘೋಷಣೆಗಳನ್ನು ಕೂಗಿದರು. ಇನ್ನೂ ನಿರ್ಭಯಾ ಅವರ ತಾಯಿ ನ್ಯಾಯಾಂಗಕ್ಕೆ, ದೇಶದ ಜನರಿಗೆ ಮತ್ತು ಮಾಧ್ಯಮಗಳಿಗೆ ಧನ್ಯವಾದ ಅರ್ಪಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ನಿರ್ಭಯಾ ತಾಯಿ, ನ್ಯಾಯ ತಡವಾಗಿ ಬಂದಿರಬಹುದು ಆದ್ರೆ ಅದು ಕುರುಡಲ್ಲವೆಂದು ಪ್ರತಿಕ್ರಿಯಿಸಿದರು. ಸತತ 7 ವರ್ಷದ ಸುಧೀರ್ಘ ಹೋರಾಟದ ನಂತರ ಅಪರಾಧಿಗಳಿಗೆ ತಕ್ಕ ಶಿಕ್ಷೆ ಸಿಕ್ಕಿದ್ದು, ಇಡೀ ಸಮಾಜಕ್ಕೆ, ನಮಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸುತ್ತೇನೆಂದರು.