ನಾಳೆ ಶ್ರೀರಂಗಪಟ್ಟಣ ದಸರಾ ಜಂಬೂ ಸವಾರಿ: ಮಾಜಿ ಸಿಎಂ ಎಸ್.ಎಂ.ಕೃಷ್ಣ ಚಾಲನೆ - ಮೂರು ದಿನಗಳ ಅದ್ಧೂರಿ ದಸರಾ
🎬 Watch Now: Feature Video
ಮಂಡ್ಯ: ಮೈಸೂರು ದಸರಾಗೂ ಮೊದಲೇ ಶ್ರೀರಂಗಪಟ್ಟಣದಲ್ಲಿ ಜಂಬೂ ಸವಾರಿ ನಡೆಯಲಿದೆ. ಬಲರಾಮನ ಮೇಲೆ ನಾಡದೇವತೆ ಚಾಮುಂಡೇಶ್ವರಿಯ ಮೆರವಣಿಗೆ ಸಾಗಲಿದೆ. ಗುರುವಾರ ಪಾರಂಪರಿಕ ಶ್ರೀರಂಗಪಟ್ಟಣ ದಸರಾಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಚಾಲನೆ ನೀಡಲಿದ್ದಾರೆ. ಕಿರಂಗೂರಿನ ಬನ್ನಿ ಮಂಟಪದ ಬಳಿ ಜಂಬೂ ಸವಾರಿಗೆ ಚಾಲನೆ ದೊರೆಯಲಿದೆ. ಜಂಬೂ ಸವಾರಿಗಾಗಿ ಈಗಾಗಲೇ ಅಭಿಮಾನ್ಯು, ಕಾವೇರಿ, ವಿಜಯ ಆನೆಗಳು ಶ್ರೀರಂಗಪಟ್ಟಣ ತಲುಪಿವೆ. ಮಧ್ಯಾಹ್ನದ ವೇಳೆಗೆ ಚಾಮುಂಡೇಶ್ವರಿಯ ಮೆರವಣಿಗೆ ಆರಂಭವಾಗಲಿದೆ. ಮೂರು ದಿನಗಳ ಅದ್ಧೂರಿ ದಸರಾಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿದೆ. ಸಂಜೆ ವೇಳೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.