ಜನತಾ ಕರ್ಫ್ಯೂ ಯಶಸ್ಸು: ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ ಗೌರವ ಸಲ್ಲಿಕೆ - ಜನತಾ ಕರ್ಫ್ಯೂ
🎬 Watch Now: Feature Video
ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಜನತಾ ಕರ್ಫ್ಯೂಗೆ ಕಾರವಾರ, ಹರಿಹರ, ಗುಂಡ್ಲುಪೇಟೆ, ಪುತ್ತೂರು ಹಾಗೂ ಉಡುಪಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಪೆಟ್ರೋಲ್ ಬಂಕ್, ಹೋಟೆಲ್, ಬೀದಿ ಬದಿ ವ್ಯಾಪಾರ, ಆಟೋ- ಬಸ್ ಸಂಚಾರ ಎಲ್ಲಾ ಹೋಟೆಲ್, ಬಾರ್ಗಳು ಬಂದ್ ಆಗಿದ್ದವು. ಖಾಸಗಿ ಹಾಗೂ ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರಿಲ್ಲದೆ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ತುರ್ತು ಅವಶ್ಯಕತೆಗಳಾದ ಮೆಡಿಕಲ್ ಶಾಪ್, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಸಂಜೆ 5 ಗಂಟೆಯ ವೇಳೆಗೆ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವರಿಗೆ ನಾಗರಿಕರು ಗಂಟೆ, ಜಾಗಟೆ, ಕೊಳಲು, ಚಪ್ಪಾಳೆ ಬಾರಿಸಿ ಗೌರವ ಸಲ್ಲಿಸಿದರು.