ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ: ಪಣಂಬೂರು ಬೀಚ್ಗೆ ರಂಗು ತುಂಬಿದ ಬಾನಾಡಿಗಳ ಹಾರಾಟ..! - The Panambur Sea
🎬 Watch Now: Feature Video
ಕರಾವಳಿ ಉತ್ಸವದ ಅಂಗವಾಗಿ ಶುಕ್ರವಾರದಿಂದ ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯುತ್ತಿದೆ. ಪಣಂಬೂರು ಕಡಲ ಕಿನಾರೆಗೆ ಆಗಮಿಸಿದವರೆಲ್ಲರ ನೋಟ ಸಮುದ್ರದ ಮೇಲಿರಲಿಲ್ಲ. ಬದಲಿಗೆ ಆಗಸದ ಮೇಲೆ ದೃಷ್ಟಿ ನೆಟ್ಟಿದ್ದರು. ಬಾನಂಗಳದಲ್ಲಿ ಅಂಥದ್ದೇನು ನಡೆಯುತ್ತಿದೆ ಎಂದು ಎಲ್ಲರಚಿತ್ತ ಆಕಾದತ್ತ ಇತ್ತು. ಆಗಸದಲ್ಲಿ ಬಣ್ಣಬಣ್ಣದ ಚಿತ್ತಾರ ಮೂಡಿಸಿದ ಗಾಳಿಪಟಗಳ ಹಾರಾಟವನ್ನು ಕಣ್ತುಂಬಿಕೊಂಡರು.