ಮಾರುಕಟ್ಟೆಯಲ್ಲಿ ಬೆಲೆಯಿದ್ದರೂ ಹೊಲದಲ್ಲಿ ಬೆಳೆಯಿಲ್ಲ: ಇದು ಈರುಳ್ಳಿ ಬೆಳೆಗಾರರ ಗೋಳು - Rain Effect on Onion
🎬 Watch Now: Feature Video
ರಾಯಚೂರು: ಕಳೆದ ವರ್ಷ ಮಾರುಕಟ್ಟೆಯಲ್ಲಿ ನಿರೀಕ್ಷೆ ಮೀರಿ ದರ ದೊರೆತ ಹಿನ್ನೆಲೆ ಈ ಬಾರಿ ಈರುಳ್ಳಿಯನ್ನ ಹೆಚ್ಚಾಗಿ ಬೆಳೆದಿದ್ದ ರೈತರಿಗೆ ವರುಣ ಕಣ್ಣೀರು ತರಿಸುವಂತೆ ಮಾಡಿದ್ದಾನೆ. ಮಾರುಕಟ್ಟೆಯಲ್ಲಿ ಈರುಳ್ಳಿಗೆ ಬೇಡಿಕೆ ಹೆಚ್ಚಿದ್ದರಿಂದ ತಾಲೂಕಿನ ಕಡ್ಗಂದೊಡ್ಡಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಈ ಬಾರಿ ಅತೀ ಹೆಚ್ಚು ಈರುಳ್ಳಿ ಬೆಳೆ ಬೆಳೆದಿದ್ದು, ಮಳೆಯ ಆರ್ಭಟಕ್ಕೆ ಬೆಳೆಗಳೆಲ್ಲಾ ಸಂಪೂರ್ಣವಾಗಿ ಕೊಚ್ಚಿ ಹೋಗಿವೆ. ಇನ್ನು ಅಳಿದುಳಿದ ಬೆಳೆ ರಕ್ಷಣೆ ಮಾಡಿಕೊಳ್ಳುವಲ್ಲಿ ರೈತ ಹರಸಾಹಸ ಪಡುತ್ತಿದ್ದಾನೆ. ಈ ಕುರಿತಾದ ಒಂದು ವರದಿ ಇಲ್ಲಿದೆ.