ಜಂಬೂಸವಾರಿ ತಾಲೀಮು ವೇಳೆ ಅಶ್ವದ ಮೇಲಿಂದ ಬಿದ್ದ ಅಶ್ವಾರೋಹಿ: ವಿಡಿಯೋ - Mysore Jamboo Savari 2020
🎬 Watch Now: Feature Video
ಮೈಸೂರು: ಸರಳ ಜಂಬೂಸವಾರಿ ತಾಲೀಮಿನಲ್ಲಿ ಬ್ಯಾಂಡ್ನ ಶಬ್ದಕ್ಕೆ ಬೆದರಿದ ಅಶ್ವವು ಗಾಬರಿಗೊಂಡು ಓಡಿದೆ. ಈ ಸಂದರ್ಭದಲ್ಲಿ ಕುದುರೆ ಮೇಲಿಂದ ಅಶ್ವಾರೋಹಿ ಕೆಳಗೆ ಬಿದ್ದ ಘಟನೆ ನಡೆದಿದೆ. ಸೋಮವಾರ ನಡೆಯಲಿರುವ ಜಂಬೂ ಸವಾರಿಗೆ ಇಂದು ಅರಮನೆ ಮುಂಭಾಗದಲ್ಲಿ ತಾಲೀಮು ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಗಜಪಡೆಯೊಂದಿಗೆ ಅಶ್ವಾರೋಹಿ ದಳವು ತಾಲೀಮಿನಲ್ಲಿ ಭಾಗವಹಿಸಿದ್ದು, ಪುಷ್ಪಾರ್ಚನೆಯ ತಾಲೀಮು ವೇಳೆ, ಬ್ಯಾಂಡ್ನ ಶಬ್ದಕ್ಕೆ ಹೆದರಿದ ಅಶ್ವ ಗಾಬರಿಯಿಂದ ಓಡಾಡ ತೊಡಗಿದೆ. ಆಗ ಮೇಲಿದ್ದ ಅಶ್ವಾರೋಹಿ ಕೆಳಗೆ ಬಿದ್ದಿದ್ದಾನೆ. ಸದ್ಯ ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ. ಬಳಿಕ ಜಂಬೂಸವಾರಿಯ ತಾಲೀಮು ಮುಂದುವರೆದಿದೆ.