ಚಿನ್ನದ ಬೆಲೆಗೆ ಒಣ ಮೆನಸಿನಕಾಯಿ ಮಾರಾಟ: ರೈತನಿಗೆ ಬಂಪರ್!! - ಒಣ ಮೆಣಸು ಬೆಲೆ ಹೆಚ್ಚು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5657433-thumbnail-3x2-hvr.jpg)
ತಾ ಮುಂದು, ನಾ ಮುಂದು ಎಂದು ತರಾಕಾರಿಗಳು, ಆಹಾರ ಸಾಮಗ್ರಿಗಳು ತಮ್ಮ ಬೆಲೆಯನ್ನ ಏರಿಸಿಕೊಂಡು...ಗ್ರಾಹಕರನ್ನ ಮುಗಿನ ಮೇಲೆ ಕೈ ಇಡುವಂತೆ ಮಾಡುತ್ತಿವೆ....ಅದರಲ್ಲಿ ಈಗ ಒಣ ಮೆನಸಿನಕಾಯಿ ತನ್ನ ಸ್ಥಾನವನ್ನ ದಕ್ಕಿಸಿಕೊಂಡಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ 33,259 ರೂಪಾಯಿಯಂತೆ ಮಾರಾಟವಾದ ಒಣ ಮೆನಸಿನಕಾಯಿ , ಗದಗ ಜಿಲ್ಲೆ ರೋಣ ತಾಲೂಕಿನ ಸವಡಿ ಗ್ರಾಮದ ರೈತ ಸಂಗರೆಡ್ಡೆಪ್ಪ ಬೂಸರೆಡ್ಡಿಗೆ ಬಾರಿ ಲಾಭ ತಂದುಕೊಟ್ಟಿದೆ. ಸಾಮಾನ್ಯವಾಗಿ ಹನ್ನೆರಡರಿಂದ ಹದಿನೆಂಟು ಸಾವಿರವರೆಗೆ ಮಾರಾಟವಾಗ್ತಿದ್ದ ಒಣ ಮೆನಸಿನಕಾಯಿ, ಸದ್ಯ ಚಿನ್ನದ ಬೆಲೆಯ ಸನಿಹಕ್ಕೆ ಬಂದಿರೋದು ಮಾತ್ರ ಅಚ್ಚರಿಯ ಸಂಗತಿಯಾಗಿದೆ.