ಡಿಕೆಶಿ ಬೆಂಗಳೂರಿಗೆ ಆಗಮನ ಹಿನ್ನೆಲೆ: ಏರ್ಪೋರ್ಟ್ನಲ್ಲಿ ಖಾಕಿ ಕಣ್ಗಾವಲು, 3 ಗೇಟ್ಗಳಲ್ಲಿ ತಪಾಸಣೆ - dks arrives to bengaluru news
🎬 Watch Now: Feature Video
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದು, ಕೈ ಕಾರ್ಯಕರ್ತರು ಹಾಗೂ ಬೆಂಬಲಿಗರು ಏರ್ಪೋರ್ಟ್ ಒಳಗೆ ಪ್ರವೇಶಿಸುತ್ತಾರೆ ಅನ್ನೋ ಕಾರಣಕ್ಕೆ ಒಳಗೆ ಪ್ರವೇಶ ಇರುವ ದೇವನಹಳ್ಳಿ, ಯಲಹಂಕ ಹಾಗೂ ಬೇಗೂರು ಕಡೆಯ ದಾರಿಗಳಲ್ಲಿ ಪೊಲೀಸರು ವಾಹನಗಳನ್ನು ಚೆಕ್ ಮಾಡಿ ಬಿಡುತ್ತಿದ್ದಾರೆ. ಕಾರ್ಯಕರ್ತರಿಗೆ ಏರ್ಪೋರ್ಟ್ ಒಳಗಡೆ ನಿರ್ಬಂಧ ಹೇರಿರುವುದರಿಂದ 3 ಗೇಟ್ಗಳಲ್ಲಿ ತಪಾಸಣೆ ನಡೆಸುತ್ತಿರುವ ಪೋಲಿಸರು, ಪ್ರಯಾಣಿಕರನ್ನು ಮಾತ್ರ ಒಳಗಡೆ ಬಿಡುತ್ತಿದ್ದಾರೆ.