ಮಂಗಳೂರಿನ ಸೂರಿಂಜೆಯಲ್ಲಿ ಅಣೆಕಟ್ಟು ಒಡೆದು ಮನೆಗೆ ನುಗ್ಗಿದ ನೀರು - ಮಂಗಳೂರಿನಲ್ಲಿ ಮಳೆಯ ಪ್ರಮಾನ
🎬 Watch Now: Feature Video
ಮಂಗಳೂರು: ಸೂರಿಂಜೆ ಬಳಿಯ ಕಟ್ಟಪುಣಿ ಎಂಬಲ್ಲಿ ಕಾಲುವೆಗೆ ನಿರ್ಮಿಸಿದ ಅಣೆಕಟ್ಟು ಮಳೆಯ ಅಬ್ಬರದಿಂದ ಒಡೆದು ಹೋಗಿದೆ. ಈ ಹಿನ್ನೆಲೆಯಲ್ಲಿ ಅಕ್ಕಪಕ್ಕದಲ್ಲಿನ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ. ಭಾರೀ ಮಳೆಯಿಂದ ವಾಹನ ಸಂಚಾರವೂ ಕಷ್ಟಕರವಾಗಿದ್ದು, ಸ್ಥಳೀಯ ಸ್ಪೋರ್ಟಿಂಗ್ ಫ್ರೆಂಡ್ಸ್ ಕ್ಲಬ್ನ ಯುವಕರು ವಾಹನ ತೆರಳಲು ದಾರಿ ಮಾಡಿಕೊಟ್ಟರು. ಕುಳಾಯಿ ಗ್ರಾಮಸಂಘದ ನಿವಾಸಿ ಕೇಶವ ಆಚಾರ್ಯ ಎಂಬವರ ಮನೆಯ ಹಿಂಭಾಗದ ತಡೆಗೋಡೆಯು ಶನಿವಾರ ರಾತ್ರಿ ಕುಸಿದು ಬಿದ್ದಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಮನಪಾ ಸದಸ್ಯ ವರುಣ್ ಚೌಟ ಹಾಗೂ ಗ್ರಾಮ ಕರಣಿಕ ಭೇಟಿ ನೀಡಿ, ಪರಿಶೀಲಿಸಿದರು.
Last Updated : Sep 20, 2020, 6:02 PM IST