ಚಾಮರಾಜನಗರ, ಕೊಳ್ಳೇಗಾಲದಲ್ಲಿ ಭರ್ಜರಿ ಮಳೆ: ಹೊಳೆಯಂತಾದ ರಸ್ತೆಗಳು, ವಾಹನ ಸವಾರರು ಹೈರಾಣು - ಒಂದೂವರೆ ತಾಸು ಸುರಿದ ಭಾರೀ ಮಳೆ
🎬 Watch Now: Feature Video
ಚಾಮರಾಜನಗರದಲ್ಲಿ ಗುಡುಗು-ಸಿಡಿಲು ಸಹಿತ ಬಿದ್ದ ಜೋರು ಮಳೆಗೆ ರಸ್ತೆಗಳು ಹೊಳೆಯಂತಾಗಿದೆ. ಒಂದೂವರೆ ತಾಸು ಸುರಿದ ಭಾರೀ ಮಳೆಗೆ ರಸ್ತೆ ಮೇಲೆಲ್ಲಾ ಹೊಳೆಯಂತೆ ನೀರು ಹರಿದು ವಾಹನ ಸವಾರರು ಪಜೀತಿ ಅನುಭವಿಸಿದರು. ಚಾಮರಾಜನಗರದ ಜೋಡಿರಸ್ತೆ, ಡಿವಿಯೇಷನ್ ರಸ್ತೆ ನೀರಿನಿಂದ ತುಂಬಿ ಕೆಲ ಬೈಕ್ ಗಳು ನೀರಿನ ರಭಸಕ್ಕೆ ಮುಳುಗಿದ ಪ್ರಸಂಗವೂ ನಡೆಯಿತು. 20 ದಿನದ ಬಳಿಕ ಸುರಿದ ಭಾರೀ ಮಳೆಯಿಂದಾಗಿ ಗಡಿಜಿಲ್ಲೆ ಜನರು ಹರ್ಷಪಟ್ಟಿದ್ದಾರೆ.