ಬಿಸಿಲ ನಾಡಿನಲ್ಲಿ ವರುಣನ ಆರ್ಭಟ: ಅಪಾರ ಪ್ರಮಾಣದ ಭತ್ತದ ಬೆಳೆ ನಾಶ - ರಾಯಚೂರಿನಲ್ಲಿ ಮಳೆ
🎬 Watch Now: Feature Video
ರಾಯಚೂರು : ತಾಲೂಕಿನಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಕಟಾವು ಹಂತಕ್ಕೆ ಬಂದಿದ್ದ ಸಾವಿರಕ್ಕೂ ಅಧಿಕ ಎಕೆರೆಯಲ್ಲಿ ಬೆಳೆದಿದ್ದ ಭತ್ತದ ಬೆಳೆ ಸಂರ್ಪೂ ನಾಶವಾಗಿದೆ. ಇನ್ನೇನು ಒಂದು ವಾರದಲ್ಲಿ ಕಟಾವಿಗೆ ಸಿದ್ದಗೊಂಡಿದ್ದ ಬೆಳೆ ನಾಶವಾಗಿದೆ. ತಾಲೂಕಿನ ಸರ್ಜಾಪೂರ, ಯಾಪಲದಿನ್ನಿ, ಬೂರ್ದಿಪಾಡ, ಆತ್ಕೂರು, ಡಿ.ರಾಂಪೂರ ಸೇರಿದಂತೆ 20ಕ್ಕೂ ಅಧಿಕ ಗ್ರಾಮಗಳಲ್ಲಿ ಬೆಳೆ ನಾಶವಾಗಿದೆ.