ಹಾವೇರಿಯಲ್ಲಿ ಭಾರೀ ಮಳೆ: ನೀರುಪಾಲಾದ ಬೆಳೆಗಳು - haveri rain news
🎬 Watch Now: Feature Video
ಹಾವೇರಿ: ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಸುರಿದಿದ್ದು, ರಟ್ಟಿಹಳ್ಳಿ ತಾಲೂಕಿನ ನಾಗವಂದ, ಹೊಸಕಟ್ಟಿ ಕುಡಪಲಿಯಲ್ಲಿ ಮಳೆರಾಯ ಆರ್ಭಟಿಸಿದ್ದಾನೆ. ಶಿಗ್ಗಾಂವಿ ಮತ್ತು ಸವಣೂರಲ್ಲಿ ಭಾರೀ ಮಳೆಯಾಗಿದ್ದು, ರೈತರ ಜಮೀನಿನಲ್ಲಿದ್ದ ಬೆಳೆಗಳು ನೀರುಪಾಲಾಗಿವೆ. ಇನ್ನೇನು ಕೈಗೆ ಬರುತ್ತಿದ್ದ ಶೇಂಗಾ ಬೆಳೆ ಜಮೀನಿನಲ್ಲಿ ನೀರು ನಿಂತಿದೆ. ಮಳೆಯಿಂದಾಗಿ ಅಡಿಕೆ, ಬಾಳೆ ಸೇರಿದಂತೆ ಜಮೀನಿನಲ್ಲಿದ್ದ ಬೆಳೆಗಳು ನೀರುಪಾಲಾಗಿವೆ. ತಗ್ಗು ಪ್ರದೇಶಗಳಿಗೆ ನೀರು ನುಗಿದ್ದು, ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.