ಬಿಡುವು ಕೊಟ್ಟು ಅಬ್ಬರಿಸಿದ ಮಳೆರಾಯ... ಹಾಸನದಲ್ಲಿ ನೆರೆ ಸಂತ್ರಸ್ತರಿಗೆ ಮತ್ತೆ ಆತಂಕ - Heavy rain in Hasan
🎬 Watch Now: Feature Video
ಹಾಸನ: ಜಿಲ್ಲೆಯಲ್ಲಿ ಹದಿನೈದು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ ಈಗ ಮತ್ತೆ ಅಬ್ಬರಿಸಿದ್ದಾನೆ. ಬಿಸಿಲಿನ ಝಳದಿಂದ ಹೈರಾಣಾಗಿದ್ದ ಜನತೆಗೆ ಮನೆಯಿಂದ ಹೊರಬರಲು ಆಗದ ಪರಿಸ್ಥಿತಿ ತಂದೊಡ್ಡಿದ್ದು, ನೆರೆ ಪೀಡಿತ ಪ್ರದೇಶದ ಸಂತ್ರಸ್ತರಿಗೆ ಮತ್ತೆ ಆತಂಕ ಶುರುವಾಗಿದೆ. ಸಂಜೆ ವೇಳೆಗೆ ಮಳೆ ಶುರುವಾಯಿತು. ಅಲ್ಲಲ್ಲಿ ವಾಹನ ಸವಾರರು ಪರದಾಡುವಂತಾಯಿತು. ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ.