ದತ್ತಪೀಠ ಹಿಂದುಗಳಿಗೆ ಒಪ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ - Dathapeeta latest news
🎬 Watch Now: Feature Video
ಚಿಕ್ಕಮಗಳೂರು ದತ್ತಪೀಠ ಹಿಂದುಗಳಿಗೆ ಒಪ್ಪಿಸಲು ಆಗ್ರಹಿಸಿ ದಾವಣಗೆರೆಯಲ್ಲಿ ಶ್ರೀರಾಮಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಶ್ರೀ ರಾಮಸೇನೆ ಕಾರ್ಯಕರ್ತರು, ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀಗುರು ದತ್ತಾತ್ರೇಯರ ತಾಯಿ ಅರಂಧುತಿ, ಅತ್ರಿ ಋಷಿಗಳ ಪವಿತ್ರ ತಪೋಭೂಮಿ. ಆದರೆ ಕೆಲವು ಆಕ್ರಮಣಕಾರರು ಪವಿತ್ರ ಸ್ಥಳ ಆಕ್ರಮಿಸಿಕೊಂಡು ಬಾಬಾಬುಡನ್ ಗಿರಿ ಎಂದು ಹೇಳುತ್ತಿರುವುದು ಅಂತ್ಯಂತ ಖಂಡನೀಯವಾಗಿದೆ. ಇತಿಹಾಸ, ಸತ್ಯಕ್ಕೆ ದ್ರೋಹ ಬಗೆಯಲಾಗುತ್ತಿದೆ ಎಂದು ಆರೋಪಿಸಿದರು. ತಕ್ಷಣ ಹಿಂದುಗಳಿಗೆ ಪೀಠವನ್ನು ಒಪ್ಪಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.