ಸಿಲಿಕಾನ್ ಸಿಟಿ ಸಂಚಾರಿ ಪೊಲೀಸರಿಂದ ಕೊರೊನಾ ವೈರಸ್ ಕುರಿತು ವಿನೂತನ ಜಾಗೃತಿ - ಕೊರೊನಾ ವೈರಸ್
🎬 Watch Now: Feature Video
ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚಾಗುತ್ತಲೆ ಇದೆ. ಇತ್ತ ರಾಜ್ಯ ಸರ್ಕಾರ ಹಲವಾರು ಜನ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದರೂ ಜನರು ಮಾತ್ರ ಮನೆಯಿಂದ ಹೊರಗೆ ಬರುವುದನ್ನು ಬಿಟ್ಟಿಲ್ಲ. ಈ ನಿಟ್ಟಿನಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ನೂತನ ಜಾಗೃತಿ ಕಾರ್ಯಕ್ರಮವೊಂದನ್ನು ಪ್ರಾರಂಭ ಮಾಡಿದ್ದು, ರಸ್ತೆಗಿಳಿಯುವ ವಾಹನ ಸವಾರರನ್ನು ತಡೆದು ಕೊರೊನಾ ವೈರಸ್ ಮಾದರಿ ಹಲ್ಮೆಟ್ ಧರಿಸಿ ಜಾಗಟೆ ಹೊಡೆಯುವ ಮೂಲಕ ವಿನೂತನ ಪ್ರಯೋಗ ಮಾಡಿದ್ದಾರೆ. 'ನನ್ನ ಹೆಸರು ಕೊರೊನಾ, ಊರೆಲ್ಲಾ ಅಡ್ಡಾಡುವವರು ಸಾವಿನ ದಲ್ಲಾಳಿಗಳಾಗುತ್ತಾರೆ' ಎಂದು ರಸ್ತೆಯಲ್ಲಿ ಓಡಾಡುವ ವಾಹನ ಸವಾರರನ್ನು ತಡೆದು ಕೊರೊನಾ ಹೆಸರಿನಲ್ಲಿ ಹೆದರಿಸಿ ಅರಿವು ಮೂಡಿಸುತ್ತಿದ್ದಾರೆ.