ಜನತಾ ಕರ್ಫ್ಯೂಗೆ ಬೆಂಬಲ : ಗಡಿಜಿಲ್ಲೆಯಲ್ಲಿ ಹೀಗಿತ್ತು ನೋಡಿ ಚಪ್ಪಾಳೆ ಕಲರವ.. - Janata curfew
🎬 Watch Now: Feature Video
ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಜಿಲ್ಲಾ ಜನತೆ ಉತ್ತಮ ಪ್ರತಿಕ್ರಿಯೆ ನೀಡುವ ಜೊತೆಗೆ ಚಪ್ಪಾಳೆಯನ್ನು ತಟ್ಟಿ ಕೊರೊನಾ ವೈರಸ್ ವಿರುದ್ಧ ಸತತವಾಗಿ ಸೇವೆ ಮಾಡುತ್ತ ಹೋರಾಡುತ್ತಿರುವರಿಗೆ ಅಭಿನಂದನೆ ಸಲ್ಲಿಸಿದರು. ಜೈ ಹಿಂದ್ ಕಟ್ಟೆಯಲ್ಲಿ ಸುರೇಶ್ ಋಗ್ವೇದಿ ಮತ್ತು ಸಂಗಡಿಗರು ದಾದಿಯೊಬ್ಬರನ್ನು ಸನ್ಮಾನಿಸಿದರು. ವಕೀಲರ ಸಂಘದ ಅಧ್ಯಕ್ಷ ಇಂದೂಶೇಖರ್, ರೈತ ಸಂಘದ ಮುಖಂಡ ಹೆಗ್ಗವಾಡಿ ಮಹೇಶ್ ಕುಮಾರ, ಹನೂರಿನ ರಾಜು ಮತ್ತು ಸ್ನೇಹಿತರು, ಮಲೆಮಹದೇಶ್ವರ ಬೆಟ್ಟದ ಸಿಬ್ಬಂದಿ, ಬಿಳಿಗಿರಿ ರಂಗನ ಬೆಟ್ಟದ ವಿಜಿಕೆಕೆ, ಬಂಡೀಪುರದಲ್ಲಿ ಚಪ್ಪಾಳೆ ಹೊಡೆದು ಕೃತಜ್ಞತೆ ಸಲ್ಲಿಸಿದರು.