ದೇವರ ಅನುಗ್ರಹ ಒಂದೇ ಈ ಸಮಸ್ಯೆಗೆ ಪರಿಹಾರ; ಪೇಜಾವರ ಶ್ರೀ - Covid latest news
🎬 Watch Now: Feature Video
ಉಡುಪಿ: ಕೋವಿಡ್ ವ್ಯಾದಿ ಜಗತ್ತನ್ನೇ ಪೀಡಿಸುತ್ತಿದ್ದು, ಇದನ್ನು ತಡೆಯಲು ಮಾನವನ ಪ್ರಯತ್ನ ನಡೆಯುತ್ತಲಿದೆ. ವೈದ್ಯಕೀಯ ಇಲಾಖೆ ಸಹ ಹಗಲು -ರಾತ್ರಿ ಎನ್ನದೇ ಶ್ರಮಿಸುತ್ತಿದೆ. ಎಲ್ಲ ಪ್ರಯತ್ನಗಳ ಜೊತೆ ಜೊತೆಗೆ ಆ ಭಗವಂತನ ಅನುಗ್ರಹವೂ ಬೇಕು. ದೇವರ ಅನುಗ್ರಹ ಇದ್ದರೆ ಎಂತಹ ಸಮಸ್ಯೆ ಬಗೆಹರಿಸಬಹುದು. ಮನೆಯಲ್ಲಿದ್ದು ಜಪ, ತಪ, ಪ್ರಾರ್ಥನೆ ಮಾಡಲು ವಿಶ್ವ ಹಿಂದೂ ಪರಿಷತ್ ಸಂಕಲ್ಪ ತೊಟ್ಟಿದೆ. ಎಲ್ಲೂ ಹೋಗದೇ ಮನೆಯಲ್ಲೇ ಇರಿ. ಮಾನವರ ಜೀವ ರಕ್ಷಣೆಗಾಗಿ ಭಗವಂತನಲ್ಲಿ ಪ್ರಾರ್ಥಿಸೋಣ ಅಂತಾ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮನವಿ ಮಾಡಿದ್ದಾರೆ.