ಗಬ್ಬೆದ್ದು ನಾರುತ್ತಿದೆ ಕೋಡ್ಲಾ ಊರು.. ಗ್ರಾಪಂ ವಿರುದ್ಧ ಜನರ ಜನರ ಹಿಡಿಶಾಪ - Kodla Gram Panchayat
🎬 Watch Now: Feature Video
ಸೇಡಂ : ತಾಲೂಕಿನ ಕೋಡ್ಲಾ ಗ್ರಾಮ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮ ಗಬ್ಬೆದ್ದು ನಾರುತ್ತಿದೆ. ಬಹುತೇಕ ಬಡಾವಣೆಗಳಲ್ಲಿ ಕಸ ವಿಲೇವಾರಿಯಾಗದೆ ಚರಂಡಿಗಳು ತುಂಬಿ ತುಳುಕುತ್ತಿವೆ. ಇದರಿಂದ ಡೆಂಘೀ, ಮಲೇರಿಯಾ ಭೀತಿ ಇಲ್ಲಿನ ಜನರನ್ನು ಕಾಡುತ್ತಿದೆ. ಹಲವು ತಿಂಗಳಿಂದ ಚರಂಡಿ,ರಸ್ತೆಗಳನ್ನು ಸ್ವಚ್ಛಗೊಳಿಸಿಲ್ಲ. ಇದರಿಂದ ರಸ್ತೆಗಳ ಮೇಲೆ ಚರಂಡಿ ನೀರು ನಿಂತು ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.