ಗಣೇಶ ಉತ್ಸವಕ್ಕೆ ಸಂಭ್ರಮದ ಸಿದ್ಧತೆ: ಹೂವು ಹಣ್ಣಿಗಾಗಿ ಮುಗಿಬಿದ್ದ ಜನ - Lal Bahadur Shastri Market
🎬 Watch Now: Feature Video
ವಿಜಯಪುರ: ಕೊರೊನಾ ಭೀತಿಯ ಮಧ್ಯೆಯೂ ಇಂದು ಗಣೇಶ ಉತ್ಸವಕ್ಕೆ ಸಂಭ್ರಮದ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು, ಇಂದು ಬೆಳಗ್ಗೆಯಿಂದ ಗಾಂಧಿ ವೃತ್ತದ ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ ಹಾಗೂ ಸುತ್ತಮುತ್ತಲೂ ಗಣೇಶನ ಪೂಜೆಗಾಗಿ ಹಣ್ಣು ಹಂಪಲು ಹಾಗೂ ಅಗತ್ಯ ಸಾಮಗ್ರಿಗಳ ಖರೀದಿಸಲು ಜನರು ಬ್ಯೂಸಿಯಾಗಿದ್ದಾರೆ. ಈ ಬಾರಿ ಜಿಲ್ಲಾಡಳಿತ ಗಣೇಶ ಉತ್ಸವಕ್ಕೆ ಕೆಲವು ನಿರ್ಬಂಧನೆಗಳನ್ನು ಹೇರಿದ್ದು, ಭಕ್ತರಲ್ಲಿ ಗೊಂದಲ ಮೂಡಿಸಿದೆ. ಕಡ್ಡಾಯವಾಗಿ ಮನೆಯಲ್ಲಿ 2 ಅಡಿ ಹಾಗೂ ದೇವಾಲಯದ ಆವರಣದಲ್ಲಿ 4 ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸೂಚನೆ ನೀಡಿದೆ. ಮಾಸ್ಕ್ ಧರಿಸಿ ದೈಹಿಕ ಅಂತರ ಕಾಯ್ದುಕೊಂಡು ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ಸೂಚಿಸಲಾಗಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿದ ಒಂದು ವಾಕ್ ಥ್ರೂ ಇಲ್ಲಿದೆ.