ಕಲಬುರಗಿ ಜಿಲ್ಲಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ಪರಿಸರ ಸ್ನೇಹಿ ಗಣಪನದೇ ಕಾರುಬಾರು - kalaburagifestivalnews
🎬 Watch Now: Feature Video
ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಕಲಬುರಗಿಯ ವಿವಿಧ ಬಡಾವಾಣೆಗಳಲ್ಲಿ ಹಾಗೂ ಮನೆಗಳಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಜನತೆ,ವಿಶೇಷ ಪೂಜೆಗಳನ್ನು ನೆರವೇರಿಸುವ ಮೂಲಕ ವಿಘ್ನೇಶ್ವರನ ಮೊರೆ ಹೋಗಿದ್ದಾರೆ. ನಗರದ ದಕ್ಷಿಣ ಕನ್ನಡ ಸಂಘದಿಂದ ಯಾತ್ರಿ ನಿವಾಸದ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಅದರಂತೆ ವಿಠ್ಠಲ ನಗರದ ಹನುಮಾನ ಮಂದಿರ,ಎಸ್.ವಿ.ಪಿ ಸರ್ಕಲ್ ಸೇರಿದಂತೆ ನಗರ ಹಾಗೂ ಜಿಲ್ಲಾದ್ಯಂತ ಹಲವೆಡೆ ಗಣೇಶನ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಬಾರಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪಗಳಿಗೆ ಪೈಪೋಟಿ ಎನ್ನುವಂತೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳು ಹೆಚ್ಚಿನ ಕಡೆ ಪ್ರತಿಷ್ಠಾಪನೆಯಾಗಿವೆ.