ಮೂರು ದಿನಗಳಿಂದ ನಡುಗಡ್ಡೆಯಲ್ಲಿ ಸಿಲುಕಿದ ಮಂಗಗಳು: ಕೋತಿಗಳ ರಕ್ಷಣೆಗೆ ಕಾರ್ಯಾಚರಣೆ - ಮಲಪ್ರಭಾ ಪ್ರವಾಹ

🎬 Watch Now: Feature Video

thumbnail

By

Published : Aug 20, 2020, 4:20 PM IST

ಗದಗ: ಮಲಪ್ರಭಾ ಪ್ರವಾಹದಿಂದ ನಡುಗಡ್ಡೆಯಾಗಿರುವ ಪ್ರದೇಶದಲ್ಲಿ ಸಿಲುಕಿರುವ ಮಂಗಗಳ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ. ರೋಣ ತಾಲೂಕಿನ ಹೊಳೆ ಆಲೂರು ಹಾಗೂ ಅಮರಗೋಳ ಮಧ್ಯೆ ಮಲಪ್ರಭಾ ಪ್ರವಾಹದಿಂದ ನಡುಗಡ್ಡೆ ಪ್ರದೇಶದಲ್ಲಿ ಎರಡು ಮಂಗಗಳು ಸಿಲುಕಿಕೊಂಡಿದ್ದವು. 3 ದಿನಗಳಿಂದ ನಡುಗಡ್ಡೆಯಲ್ಲಿ ಸಿಲುಕಿ ಆಚೆ ಬರಲಾಗದೆ ಪರದಾಡುತ್ತಿವೆ. ಆಹಾರ ಸಿಗದೆ ಕಂಗಾಲಾಗಿದ್ದ ಕೋತಿಗಳು ಹೊರಗಡೆ ಬರೋದಕ್ಕೆ ಇಣುಕಿ ಇಣುಕಿ ನೋಡುತ್ತಿದ್ದವು. ಈ ವಿಚಾರವನ್ನು ಜಿಲ್ಲಾಡಳಿತದ ಗಮನಕ್ಕೆ ಸ್ಥಳೀಯರು ತಂದಾಗ ಅಗ್ನಿ ಶಾಮಕದಳ, ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಬೋಟ್ ವ್ಯವಸ್ಥೆ ಮಾಡಿಕೊಂಡು ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.