ವಿಶ್ವನಾಥ್, ಯತ್ನಾಳ್ರನ್ನು ನಂಬದಿರಲು ನನ್ನ ಬಳಿ ಕಾರಣಗಳಿಲ್ಲ: ಮಾಜಿ ಸಭಾಪತಿ ಬಿ.ಎಲ್. ಶಂಕರ್ - ಚಿಕ್ಕಮಗಳೂರು ಲೇಟೆಸ್ಟ್ ನ್ಯೂಸ್
🎬 Watch Now: Feature Video
ಚಿಕ್ಕಮಗಳೂರು: ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹಾಗೂ ಶಾಸಕ ಯತ್ನಾಳ್ ಅವರನ್ನ ನಂಬದಿರಲು ನನ್ನ ಬಳಿ ಕಾರಣಗಳಿಲ್ಲ ಎಂದು ಮಾಜಿ ಸಭಾಪತಿ ಬಿ.ಎಲ್. ಶಂಕರ್ ಹೇಳಿದ್ದಾರೆ. ಅವರು ರಾಷ್ಟ್ರ ಮಟ್ಟದಲ್ಲಿ ಪ್ರಭಾವ ಇರುವವರು, ಹಿರಿಯರಿಗೆ ಬೇಕಾದವರು. ಕೇಂದ್ರ ಹಾಗೂ ರಾಜ್ಯದಲ್ಲಿ ಸಚಿವರಾದ ಅನುಭವಿಗಳು. ಆಧಾರವಿಲ್ಲದೆ ಅವರು ಯಾವುದೇ ಮಾತನ್ನ ಆಡಲಾರರು. ಹೈಕಮಾಂಡ್ ಅಥವಾ ಸಿಎಂರನ್ನು ಬ್ಲ್ಯಾಕ್ಮೇಲ್ ಮಾಡಿರಬಹುದು. ಸಂತೋಷ್ ಆಸ್ಪತ್ರೆ ಸೇರಿದಾಗ್ಲೂ ಸಿಡಿಯ ಸಂಬಂಧವಿತ್ತು. ಆಗ ಆ ಪ್ರಕರಣವನ್ನ ಮುಚ್ಚಿ ಹಾಕುವ ಪ್ರಕರಣ ನಡೆದಿತ್ತು. ಸಂತೋಷ್ ಅವರು ಆಸ್ಪತ್ರೆಗೆ ದಾಖಲಾದಾಗ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಯತ್ನದ ಕೇಸ್ ದಾಖಲಾಗಿತ್ತು. ಆದೀಗ ಏನಾಯ್ತು, ತನಿಖೆ ಆಯ್ತಾ, ತಾರ್ಕಿಕ ಅಂತ್ಯ ಕಂಡಿದಿಯಾ ಎಂಬುದು ಗೊತ್ತಾಗಬೇಕು. ಯತ್ನಾಳ್ ಹೇಳಿಕೆಯ ಮೇಲೆ ಪೊಲೀಸರು ಸುಮೊಟೋ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.