ಚಿಂಚನಸೂರ್ ದಂಪತಿ ತೊಡೆ ಚರ್ಮದಿಂದ ಸಿಎಂಗೆ ಪಾದರಕ್ಷೆ.. ಆದರೆ, ಅದಕ್ಕೂ ಮೊದಲು.. - ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಹೇಳಿಕೆ
🎬 Watch Now: Feature Video
ಹಾವೇರಿ ತಾಲೂಕಿನ ನರಸೀಪುರದಲ್ಲಿ ನಡೆಯುತ್ತಿರುವ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿಕೆಯೊಂದನ್ನು ನೀಡಿದ್ದಾರೆ. ಚೌಡಯ್ಯ ಸಮಾಜವನ್ನ ಎಸ್ಟಿಗೆ ಸೇರಿಸಲೆಂದೇ ಯಡಿಯೂರಪ್ಪ ಹುಟ್ಟಿ ಬಂದಿದ್ದಾರೆ. ಸಮಾಜವನ್ನು ಎಸ್ಟಿಗೆ ಸೇರಿಸಿದ್ರೆ ಚಿಂಚನಸೂರ ದಂಪತಿಯ ತೊಡೆ ಚರ್ಮದಿಂದ ಸಿಎಂಗೆ ಪಾದರಕ್ಷೆ ಮಾಡಿಸಿಕೊಡ್ತೀವಿ. ನಾವು ಅಂಬಿಗರು ನಂಬಿಗಸ್ಥರು. ಹೊಳೆ ದಾಟಿಸೋರು. ಅಂಬಿಗರು ಯಾರನ್ನೂ ಮುಳುಗಿಸೋದಿಲ್ಲ. ದೆಹಲಿಗೆ ಹೋಗಿ ಪ್ರಧಾನಿ ಮತ್ತು ಅಮಿತ್ ಶಾ ಭೇಟಿ ಮಾಡಿ ಚೌಡಯ್ಯ ಸಮಾಜವನ್ನು ಎಸ್ಟಿಗೆ ಸೇರಿಸಿ ಅಂತಾ ಸಿಎಂಗೆ ಬಾಬುರಾವ್ ಚಿಂಚನಸೂರ್ ಮನವಿ ಮಾಡಿದ್ದಾರೆ.