ಮೈಸೂರಿನಲ್ಲಿ ಹಾರುವ ಹಾವು ಪ್ರತ್ಯಕ್ಷ: ವಿಡಿಯೋ ನೋಡಿ - ಉರಗ ತಜ್ಞರಿಂದ ಹಾರುವ ಹಾವಿನ ರಕ್ಷಣೆ
🎬 Watch Now: Feature Video

ಮೈಸೂರು ನಗರದ ಆರ್.ಬಿ.ಐ ವಸತಿಗೃಹದಲ್ಲಿ ಮೂರು ಅಡಿ ಉದ್ದದ ಹಾರುವ ಹಾವು ಪ್ರತ್ಯಕ್ಷವಾಗಿದ್ದು , ಇದನ್ನು ರಕ್ಷಿಸಿ ಮೃಗಾಲಯಕ್ಕೆ ಬಿಡಲಾಗಿದೆ. ನಗರದ ಆರ್.ಬಿ.ಐ ವಸತಿಗೃಹದಲ್ಲಿ ಕಳೆದ ಒಂದು ವಾರದಿಂದ ಈ ಹಾವು ಕಾಣಿಸಿಕೊಳ್ಳುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಇದೀಗ ಉರಗ ತಜ್ಞ ಕೆಂಪರಾಜು ಹಾವು ರಕ್ಷಣೆ ಮಾಡಿದ್ದಾರೆ. ಹಾರುವ ಹಾವುಗಳು ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿ ಕಾಣ ಸಿಗುತ್ತವೆ. ಮರದಿಂದ ಮರಕ್ಕೆ ಹಾರುವ ಈ ಹಾವುಗಳು ಇವಾಗಿವೆ . ಇನ್ನು ಈ ಹಾವು ಹಸಿರು ಮಿಶ್ರಿತ ಕೆಂಪು ಬಣ್ಣದ ಹಾವಾಗಿದ್ದು, ಇದನ್ನು ರಕ್ಷಿಸಿ ಚಾಮರಾಜೇಂದ್ರ ಮೃಗಾಲಯಕ್ಕೆ ನೀಡಿದ್ದಾರೆ.