ಪ್ರವಾಹದಲ್ಲಿ ಕೊಚ್ಚಿ ಹೋದ ಧಾನ್ಯಗಳು ಕೇಳೋರಿಲ್ಲ ರೈತರ ಗೋಳು.. - farmer worry
🎬 Watch Now: Feature Video
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮದಲ್ಲಿ ಪ್ರವಾಹದಿಂದಾಗಿ ರೈತರ ಸುಮಾರು 4 ಟನ್ ನಷ್ಟು ಧಾನ್ಯ ನಾಶವಾಗಿದೆ.ಜತೆಗೆ ಎಲ್ಲ ಮನೆಗಳು ಶಿಥಿಲಗೊಂಡಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಪ್ರವಾಹದಿಂದ ಸಂಪೂರ್ಣ ಜಲಾವೃತಗೊಂಡಿದ್ದ ಹುನ್ನರಗಿ ಗ್ರಾಮದಲ್ಲಿ ಎಲ್ಲಿ ನೋಡಿದರು ಕೊಚ್ಚಿ ಹೋದ ಧಾನ್ಯವೇ ಕಾಣುತ್ತಿದೆ. ಅವುಗಳನ್ನೇ ಆರಿಸಿ ಸಂಗ್ರಹಿಸಲು ರೈತರು ಪ್ರಯತ್ನಿಸುತ್ತಿದ್ದಾರೆ.