ಕಾರವಾರ: ಮೀನಿಗೆ ಬೀಡಿ ಸೇದಿಸಿ ವಿಕೃತಿ ಮೆರೆದ ಬೋಟ್ ಕಾರ್ಮಿಕರು! - ಮೀನಿಗೆ ಬೀಡಿ ಸೇದಿಸಿದ ಬೋಟ್ ಕಾರ್ಮಿಕರು
🎬 Watch Now: Feature Video
ಕಾರವಾರ: ಗಾಳಕ್ಕೆ ಸಿಕ್ಕ ಮೀನಿಗೆ ಬೀಡಿ ಸೇದಿಸಿ ವಿಕೃತಿ ಮೆರೆದಿರುವ ಘಟನೆ ಕಾರವಾರ ತಾಲೂಕಿನ ಬೈತಖೋಲ ಮೀನುಗಾರಿಕಾ ಬಂದರಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಚೊಂಚಿ ಎಂದು ಕರೆಯಲ್ಪಡುವ ಮೀನನ್ನು ನೀರಿನಿಂದ ಹೊರತೆಗೆದಾಗ ದೊಡ್ಡ ಮಟ್ಟದಲ್ಲಿ ಉಸಿರಾಡಲು ಪ್ರಾರಂಭಿಸಿತ್ತು. ಈ ವೇಳೆ ಬೋಟ್ ಕಾರ್ಮಿಕರು ಮೀನಿನ ಬಾಯಿಗೆ ಬೀಡಿ ಇಟ್ಟು ವಿಕೃತಿ ಮೆರೆದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬೋಟ್ ಕಾರ್ಮಿಕರ ವಿಕೃತಿಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ. ಮೀನು ಸಾವು ಬದುಕಿನ ಹೋರಾಟದಲ್ಲಿರುವಾಗ ಈ ರೀತಿ ವಿಕೃತಿ ಮೆರೆಯುವುದು ಎಷ್ಟರಮಟ್ಟಿಗೆ ಸರಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated : Nov 29, 2020, 2:50 PM IST