ಮಲೆನಾಡಿನಲ್ಲಿ ಮಂಗನ ಕಾಯಿಲೆ ಮೊದಲ ಪ್ರಕರಣ ಪತ್ತೆ - monkey disease
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5593258-thumbnail-3x2-smg.jpg)
ಮಲೆನಾಡಿನಲ್ಲಿ ಕಳೆದ ಬಾರಿ 23 ಜನರನ್ನು ಬಲಿ ಪಡೆದಿದ್ದ ಮಹಾಮಾರಿ ಮಂಗನಕಾಯಿಲೆ ಈ ಬಾರಿಯೂ ಕಾಣಿಸಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೀರೆಮಕ್ಕಿ ಗ್ರಾಮದ ನರಸಿಂಹ ಎಂಬುವರು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಜನವರಿ 1 ರಂದು ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ನರಸಿಂಹ ಅವರು ಕೆಎಫ್ಡಿ ಭಾದಿತ ಪ್ರದೇಶದವರಾದ್ದರಿಂದ ಅವರ ರಕ್ತದ ಮಾದರಿಯನ್ನು ಶಿವಮೊಗ್ಗದ ವಿಡಿಆರ್ ಲ್ಯಾಬ್ನಲ್ಲಿ ಪರೀಕ್ಷೆ ಮಾಡಿದ್ದು, ಕೆಎಫ್ಡಿ ವೈರಸ್ ಇರುವುದು ದೃಢಪಟ್ಟಿದೆ. ಈ ಕುರಿತ ವರದಿ ಇಲ್ಲಿದೆ