ಗಣೇಶನ ಮೂರ್ತಿಗೆ ಹೊದಿಸಿದ್ದ ಪ್ಲಾಸ್ಟಿಕ್ಗೆ ಬೆಂಕಿ: ಮಣ್ಣು ತೂರಿ ನಂದಿಸಲು ಯತ್ನಿಸಿದ ಯುವಕರ ತಂಡ - ಅನಾಹುತ
🎬 Watch Now: Feature Video
ಗಣೇಶನ ಮೂರ್ತಿಗೆ ಹೊದಿಸಿದ್ದ ಪ್ಲಾಸ್ಟಿಕ್ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡ ಘಟನೆ ಬೆಳಗಾವಿಯ ಭಾಗ್ಯ ನಗರದಲ್ಲಿ ನಡೆದಿದೆ. ನಾಳೆ ಗಣೇಶೋತ್ಸವ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಮೂಲಕ ಎತ್ತರದ ಗಣೇಶನ ವಿಗ್ರಹ ಸಾಗಿಸಲಾಗುತ್ತಿತ್ತು. ಈ ವೇಳೆ ಪ್ಲ್ಯಾಸ್ಟಿಕ್ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಆರಿಸಲು ಯುವಕರು ಹರಸಾಹಸ ಪಟ್ಟಿದ್ದಾರೆ. ಮಣ್ಣು ತೂರಿ ಬೆಂಕಿ ನಂದಿಸಲು ಯತ್ನ ಮಾಡಲಾಯಿತು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
Last Updated : Sep 1, 2019, 12:37 PM IST