ವಿದ್ಯುತ್ ತಂತಿ ತಗುಲಿ ಹತ್ತಿ ತುಂಬಿದ ಲಾರಿ ಧಗಧಗ... ವಿಡಿಯೋ - fire on lorry in haveri latest news
🎬 Watch Now: Feature Video
ವಿದ್ಯುತ್ ತಂತಿ ತಗುಲಿ ಹತ್ತಿ ತುಂಬಿದ ಲಾರಿಯೊಂದು ಧಗಧಗನೆ ಹೊತ್ತಿ ಉರಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮಾಗೋಡ ಕ್ರಾಸ್ ಬಳಿ ನಡೆದಿದೆ. ಮಾಗೋಡ ಗ್ರಾಮದಿಂದ ರಾಣೆಬೆನ್ನೂರು ನಗರದತ್ತ ತೆರಳುತ್ತಿದ್ದ ಲಾರಿಗೆ ಬೆಂಕಿ ತಗುಲಿದ್ದು, ಲಾರಿ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸೋವಷ್ಟರಲ್ಲಿ ಲಾರಿ ಸುಟ್ಟು ಕರಕಲಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಹಾನಿ ಹತ್ತಿ ಬೆಂಕಿಗಾಹುತಿಯಾಗಿದೆ. ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.