ಪೂರ್ಣಪ್ರಜ್ಞ ಕಾಲೇಜು ಬಳಿ ಬೆಂಕಿ ಅವಘಡ: ಅಪಾರ ಪ್ರಮಾಣದ ವಸ್ತು ನಾಶ
🎬 Watch Now: Feature Video
ಉಡುಪಿ: ನಗರದ ಪೂರ್ಣಪ್ರಜ್ಞ ಕಾಲೇಜು ಸಮೀಪ ಬೆಂಕಿ ಅವಘಡ ಸಂಭವಿಸಿದೆ. ಕಾಲೇಜಿನ ಮುಂಭಾಗದಲ್ಲಿರುವ ಸಂಪರ್ಕ ಜೆರಾಕ್ಸ್ ಅಂಗಡಿಯಲ್ಲಿ ಸಂಜೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಸಂಜೆ 7ಗಂಟೆ ಸುಮಾರಿಗೆ ಜೆರಾಕ್ಸ್ ಅಂಗಡಿಯನ್ನು ಬಂದ್ ಮಾಡಿ ಮಾಲೀಕರು ಮನೆಗೆ ಹೋಗಿದ್ದರು. ಈ ಸಂದರ್ಭ ಶಾರ್ಟ್ ಸರ್ಕ್ಯೂಟ್ ನಡೆದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳದಲ್ಲಿದ್ದವರು ಕೂಡಲೇ ಪೊಲೀಸ್ ಠಾಣೆಗೆ ಮತ್ತು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಜೆರಾಕ್ಸ್ ಅಂಗಡಿಯಲ್ಲಿರುವ ಮಷಿನ್ಗಳು, ಪೇಪರ್ಗಳು, ಕೆಲವು ಪ್ರಮುಖ ದಾಖಲೆಗಳು ಸುಟ್ಟು ಕರಕಲಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆಗೆ ಸ್ಥಳೀಯ ಯುವಕರು ಕೂಡ ಕೈಜೋಡಿಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.