ಐದನೇ ದಿನದ ಗಣೇಶ ನಿಮಜ್ಜನ: ಸಾರ್ವಜನಿಕ ಗಣೇಶೋತ್ಸವಕ್ಕೆ ತೆರೆ - ಗಣೇಶ ನಿಮಜ್ಜನ
🎬 Watch Now: Feature Video
ರಾಯಚೂರು: ಕೊರೊನಾ ವೈರಸ್ ಹಿನ್ನೆಲೆ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳಿಂದ 5 ದಿನಗಳ ಕಾಲ ಪ್ರತಿಷ್ಟಾಪಿಸಿದ್ದ ಸಾರ್ವಜನಿಕ ಗಣೇಶನ ನಿಮಜ್ಜನ ಕಾರ್ಯ ಸರಳವಾಗಿ ನಡೆಯಿತು. ನಗರದ ಕಾಸಬಾಯಿಯಲ್ಲಿ ಜಿಲ್ಲಾಡಳಿತ ಮತ್ತು ನಗರಸಭೆಯಿಂದ ನಿಮಜ್ಜನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚು ಜನರು ಸೇರದೆ, ಯಾವುದೇ ರೀತಿಯ ಭಜನೆ, ಡಿಜೆಗಳಿಲ್ಲದೆ, 30ಕ್ಕೂ ಅಧಿಕ ಗಣೇಶ ಮಂಡಳಿಗಳು ಹಾಗೂ ಸಾರ್ವಜನಿಕರು ತಮ್ಮ ಮನೆಯಲ್ಲಿ ಪ್ರತಿಷ್ಟಾಪಿಸಿದ್ದ ಗಣೇಶ ಮೂರ್ತಿಗಳ ನಿಮಜ್ಜನ ನಡೆಯಿತು. ಮುಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಒಂದು ಕ್ರೇನ್ ವ್ಯವಸ್ಥೆ, ಅಗ್ನಿಶಾಮಕದಳ, ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.