ETV Bharat / business

ಕೃಷಿ ವಲಯ ಶೇ 4ರಷ್ಟು ಬೆಳವಣಿಗೆ: 2025ರಲ್ಲಿ ದಾಖಲೆಯ ಆಹಾರ ಧಾನ್ಯ ಉತ್ಪಾದನೆ ನಿರೀಕ್ಷೆ - FOODGRAIN OUTPUT

2025ರಲ್ಲಿ ಭಾರತದ ಆಹಾರ ಧಾನ್ಯಗಳ ಉತ್ಪಾದನೆ ಉತ್ತಮವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

2025ರಲ್ಲಿ ದಾಖಲೆಯ ಆಹಾರ ಧಾನ್ಯ ಉತ್ಪಾದನೆ ನಿರೀಕ್ಷೆ
2025ರಲ್ಲಿ ದಾಖಲೆಯ ಆಹಾರ ಧಾನ್ಯ ಉತ್ಪಾದನೆ ನಿರೀಕ್ಷೆ (IANS)
author img

By PTI

Published : Dec 29, 2024, 12:24 PM IST

ನವದೆಹಲಿ: 2025ರಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಭಾರತವು ಹೊಸ ದಾಖಲೆ ಬರೆಯಲು ಸಿದ್ಧವಾಗಿದೆ. ದೇಶಾದ್ಯಂತ ಮಾನ್ಸೂನ್ ಮಳೆ ಉತ್ತಮವಾಗಿ ಸುರಿದಿದ್ದು, ಕೃಷಿ ವಲಯವು ಗಮನಾರ್ಹವಾಗಿ ಚೇತರಿಸಿಕೊಂಡಿದೆ. ಆದಾಗ್ಯೂ ಬೇಳೆಕಾಳು ಮತ್ತು ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಕೆಲವೊಂದು ಸಮಸ್ಯೆಗಳು ಮುಂದುವರಿದಿವೆ.

ಕೃಷಿ ಸಚಿವಾಲಯದ ಆರಂಭಿಕ ಅಂದಾಜುಗಳು ಆಶಾದಾಯಕವಾಗಿವೆ. ಜೂನ್ 2025 ಕ್ಕೆ ಕೊನೆಗೊಳ್ಳುವ 2024-25 ಬೆಳೆ ವರ್ಷದಲ್ಲಿ ದಾಖಲೆಯ 164.7 ಮಿಲಿಯನ್ ಟನ್ ಖಾರಿಫ್ (ಬೇಸಿಗೆ) ಆಹಾರ ಧಾನ್ಯಗಳು ಉತ್ಪಾದನೆಯಾಗುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ.

ಚಳಿಗಾಲದ ಬಿತ್ತನೆಯು ಸ್ಥಿರವಾದ ಪ್ರಗತಿಯನ್ನು ಕಾಯ್ದುಕೊಂಡಿದೆ. 2024 ರ ಡಿಸೆಂಬರ್ ಮಧ್ಯದ ವೇಳೆಗೆ 29.31 ಮಿಲಿಯನ್ ಹೆಕ್ಟೇರ್​ಗಳಲ್ಲಿ ಗೋಧಿ ಬಿತ್ತನೆ ಮಾಡಲಾಗಿದೆ. ಒಟ್ಟು 55.88 ಮಿಲಿಯನ್ ಹೆಕ್ಟೇರ್​ನಲ್ಲಿ ರಾಬಿ (ಚಳಿಗಾಲದ) ಬೆಳೆ ಬೆಳೆಯಲಾಗಿದೆ.

ಪಿಟಿಐನೊಂದಿಗೆ ಮಾತನಾಡಿದ ಕೃಷಿ ಕಾರ್ಯದರ್ಶಿ ದೇವೇಶ್ ಚತುರ್ವೇದಿ "ವಾಡಿಕೆಯ ಸಾಮಾನ್ಯ ಮಳೆಯಿಂದಾಗಿ ಖಾರಿಫ್ ಬೆಳೆ ಉತ್ತಮವಾಗಿದೆ. ಒಟ್ಟಾರೆಯಾಗಿ ಇಡೀ ವರ್ಷದ ಬೆಳೆ ನಿರೀಕ್ಷೆ ಭರವಸೆದಾಯಕವಾಗಿದೆ" ಎಂದು ಹೇಳಿದರು. ಆದಾಗ್ಯೂ ಫೆಬ್ರವರಿ-ಮಾರ್ಚ್​​ನಲ್ಲಿ ಬೀಸುವ ಶಾಖದ ಅಲೆಗಳು ಗೋಧಿ ಕೊಯ್ಲಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದರು.

ಕೃಷಿ ಕ್ಷೇತ್ರವು 2024-25ರಲ್ಲಿ ಶೇಕಡಾ 3.5-4 ರಷ್ಟು ಬೆಳವಣಿಗೆಯ ಮುನ್ಸೂಚನೆಯೊಂದಿಗೆ ಬಲವಾಗಿ ಪುಟಿದೇಳುವ ನಿರೀಕ್ಷೆಯಿದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ ಶೇಕಡಾ 1.4 ರಷ್ಟಿತ್ತು.

ಉತ್ತಮ ಮುಂಗಾರು ಮತ್ತು ಗ್ರಾಮೀಣ ಭಾಗದಲ್ಲಿ ಬೇಡಿಕೆ ಹೆಚ್ಚಾಗಿರುವುದು ಕೂಡ ಈ ಸುಧಾರಣೆಗೆ ಕಾರಣವಾಗಿದೆ ಎಂದು ಕೃಷಿ ಅರ್ಥಶಾಸ್ತ್ರಜ್ಞ ಎಸ್ ಮಹೇಂದ್ರ ದೇವ್ ತಿಳಿಸಿದರು.

ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಪ್ರವಾಹ ಮತ್ತು ಬರಗಾಲದ ಸಮಸ್ಯೆಗಳು ಎದುರಾದರೂ ಕೃಷಿ ಉತ್ಪಾದನೆ ಉತ್ತಮವಾಗಿದೆ. ಹವಾಮಾನ ಬದಲಾವಣೆ-ಪ್ರೇರಿತ ಹವಾಮಾನ ವೈಪರೀತ್ಯಗಳು ಕೆಲ ಪ್ರದೇಶಗಳಲ್ಲಿ ವಿಶೇಷವಾಗಿ ಈರುಳ್ಳಿ ಮತ್ತು ಟೊಮೆಟೊ ಇಳುವರಿಯ ಮೇಲೆ ಪರಿಣಾಮ ಬೀರಿವೆ.

ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸರ್ಕಾರವು 2025 ರಲ್ಲಿ ಖಾದ್ಯ ತೈಲಗಳು - ಎಣ್ಣೆಕಾಳುಗಳ ರಾಷ್ಟ್ರೀಯ ಮಿಷನ್ (ಎನ್ಎಂಇಒ-ಎಣ್ಣೆಕಾಳುಗಳು) ಯೋಜನೆಯನ್ನು ಜಾರಿಗೊಳಿಸಲಿದೆ. ಬಜೆಟ್​ನಲ್ಲಿ ಇದಕ್ಕಾಗಿ 10,103 ಕೋಟಿ ರೂ.ಗಳ ನಿಧಿ ಮೀಸಲಿಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ಮಧ್ಯಸ್ಥಿಕೆ ವಹಿಸುವಿಕೆ ಮತ್ತು ಬೆಂಬಲ ಬೆಲೆಗಳನ್ನು ಹೆಚ್ಚಿಸುವ ಮೂಲಕ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಈ ಉಪಕ್ರಮ ಹೊಂದಿದೆ.

ಇದನ್ನೂ ಓದಿ : ಜನವರಿ 1ರಿಂದ ಏನೆಲ್ಲ ಬದಲಾವಣೆ?: ಯಾವೆಲ್ಲ ರೂಲ್ಸ್​ ಚೇಂಜ್​​, ಇದಕ್ಕೆಲ್ಲ ಈಗಲೇ ಸಿದ್ಧರಾಗಿ! - GST CHANGES FROM JANUARY 2025

ETV Bharat Logo

Copyright © 2025 Ushodaya Enterprises Pvt. Ltd., All Rights Reserved.