ಹುಬ್ಬಳ್ಳಿ: ಯುಗಾದಿ ಹಬ್ಬದ ಪ್ರಯುಕ್ತ ಕೃಷಿ ಚಟುವಟಿಕೆಗೆ ಚಾಲನೆ ನೀಡಿದ ಅನ್ನದಾತ - ಯುಗಾದಿ ಹಬ್ಬ
🎬 Watch Now: Feature Video
ಹುಬ್ಬಳ್ಳಿ: ಯುಗಾದಿ ಬಂದರೆ ಸಾಕು ಗಿಡ-ಮರಗಳು ಚಿಗುರೊಡೆದು ನವ ವಸಂತವನ್ನು ಸ್ವಾಗತಿಸುತ್ತವೆ. ಹಳೆಯ ಕಹಿಯೊಂದಿಗೆ ಹೊಸ ಹರುಷದೊಂದಿಗೆ ನವ ವಸಂತಕ್ಕೆ ಕಾಲಿಡುವ ಸಂಕೇತ ಯುಗಾದಿ. ಯುಗಾದಿಯಂದು ಕೃಷಿ ಚಟುವಟಿಕೆ ಆರಂಭಿಸಿದ್ರೆ ಉತ್ತಮ ಮಳೆ, ಬೆಳೆಯಾಗುತ್ತದೆ ಎಂಬ ನಂಬಿಕೆ ಉತ್ತರ ಕರ್ನಾಟಕ ಭಾಗದಲ್ಲಿದೆ. ಹೀಗಾಗಿ, ಜಿಲ್ಲೆಯ ರೈತವರ್ಗ ತಮ್ಮ ಎತ್ತುಗಳೊಂದಿಗೆ ಜಮೀನಿಗೆ ತೆರಳಿ ಮುಂಗಾರು ಬಿತ್ತನೆಗೆ ಭೂಮಿ ಹದಗೊಳಿಸುವ ಮುನ್ನ ಎತ್ತುಗಳು ಹಾಗೂ ಭೂಮಿಗೆ ಪೂಜೆ ಸಲ್ಲಿಸಿದರು. ಬಳಿಕ ಸಾಂಪ್ರದಾಯಕವಾಗಿ ಕೃಷಿ ಚಟುಟಿಕೆಗೆ ಚಾಲನೆ ನೀಡಿದರು.